ಹೊರಗಿಂದ ಬಂದೋರಿಗೆ ಆಟೋಚಾಲಕರು ಕನ್ನಡ ಕಲಿಸಿ ; ಎಸ್ಪಿ ನಿಖಿಲ್ ಆಟೋ ಚಾಲಕರು ವೈಯಕ್ತಿಕ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಬೇಕು, ಹೊರರಾಜ್ಯಗಳಿಂದ ಬರುವವರು ಮೊದಲು ನಿಮ್ಮ ಸಂಪರ್ಕಕ್ಕೆ ಸಿಗುವುದರಿಂದ ಅವರಿಗೆ ಕನ್ನಡ ಕಲಿಸುವ ಕಾರ್ಯ ನಿಮ್ಮಿಂದಲೇ ಆಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಕರೆ ನೀಡಿದರು. ಶನಿವಾರ ನಗರದ ಪಿಸಿ ಬಡಾವಣೆ ಆಟೋ ನಿಲ್ದಾಣದಲ್ಲಿ ೭೦ ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಆಟೋ ಚಾಲಕರಿಗೆ ಕೊಡುಗೆಯಾಗಿ ನೀಡಿದ್ದ ಸಮವಸ್ತ್ರಗಳನ್ನು ವಿತರಿಸಿ ಅವರು ಮಾತನಾಡಿದರು.