ಸಂಕೋಚಿತ ಜಾತಿ ಮನೋಭಾವದಿಂದ ಹೊರ ಬರಬೇಕಾಗಿದೆ” ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮನೋಹರ ಮಸ್ಕಿ ಅಭಿಪ್ರಾಯಪಟ್ಟರು. ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಡಾ. ಎಂ. ಬಸವರಾಜ ಅವರ ಮನೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀಶೈಲಪ್ಪ ಹಾಗೂ ಈರಮ್ಮ ಮಸ್ಕಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶರಣರು ಮತ್ತು ದಾರ್ಶನಿಕರು ಸಾರಿದ ಸಮಾನತೆ–ಸೌಹಾರ್ದದ ಸಂದೇಶವನ್ನು ಇಂದಿನ ಸಮಾಜ ವಿಸ್ಮರಿಸುತ್ತಿರುವುದನ್ನು ವಿಷಾದಿಸಿದರು.