ಬೆಂಗಳೂರು ಉತ್ತರ: ಸಿಎಂ ಕುರ್ಚಿ ವಿವಾದ; ನಮ್ಮ ಹೈಕಮಾಂಡ್ ಶಕ್ತಿಯುತವಾಗಿದೆ: ನಗರದಲ್ಲಿ ಬಾಲಕೃಷ್ಣ
ಬ್ರೇಕ್ ಫಾಸ್ಟ್ ವಿಚಾರವಾಗಿ ವಿಧಾನಸೌಧದಲ್ಲಿ ಶಾಸಕ ಮಾಗಡಿ ಬಾಲಕೃಷ್ಣ ಅವರು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಮಾತನಾಡಿ, ನಮ್ಮ ಹೈಕಮಾಂಡ್ ಶಕ್ತಿಯುತವಾಗಿದೆ. ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕ್ತಾರೆ. ಎಲ್ಲದಕ್ಕೂ ಕೂಡ ತೆರೆ ಎಳೆಯುತ್ತಾರೆ ಎಂಬ ವಿಶ್ವಾಸ ಇದೆ ಎಂದರು. ಇನ್ನು ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಸ್ಟ್ಯಾಂಡ್ ಈಗಲೂ ತೆಗೆದುಕೊಳ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬ್ರೇಕ್ ಫಾಸ್ಟ್ ಮಾಡಿದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ನೀವು ನಮಗೆ ಫುಲ್ ಮಿಲ್ಸ್ ಕೊಡ್ಸಕ್ ಹೊರಟಿದ್ದೀರಾ..? ನಮ್ದ್ ಅವತ್ತು ಒಂದೇ ಸ್ಟ್ಯಾಂಡು ಈಗಲೂ ಅದೇ ಸ್ಟ್ಯಾಂಡು, ನಮ್ಮ ಸ್ಟ್ಯಾಂಡು ಈಗಾಗಲೇ ಹೇಳಿದ್ದೇವೆ, ಅವರವರ ಅಭಿಪ್ರಾಯಗಳು ಈಗಾಗಲೇ ತಿಳಿಸಿದ್ದೇವೆ ಎಂದರು.