ಒಳ ಮೀಸಲಾತಿ ಅನುಷ್ಠಾನ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ವಿಧಾನಸೌಧದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪರಮೇಶ್ವರ್ ಅವರು, ಒಳ ಮೀಸಲಾತಿ ಜಾರಿಯಲ್ಲಿ ಯಾವುದೇ ಗೊಂದಲ ಇಲ್ಲ. ಒಳ ಮೀಸಲಾತಿ ಸಂಬಂಧ ಸುಗ್ರಿವಾಜ್ಞೆ ಹೊರಡಿಸಬೇಕು ಅಂತ ತೀರ್ಮಾನ ಆಗಿತ್ತು. ಎ.ಬಿ.ಸಿ ಅಂತ ಕ್ಯಾಟಗರಿ ಮಾಡಿದ್ವಿ ಅದಕ್ಕೆ ಸುಗ್ರಿವಾಜ್ಞೆ ಹೊರಡಿಸಬೇಕು ಅಂತ ಹೇಳಿದ್ರು. ಅ ಬಳಿಕ ಕಾಯ್ದೆ ಮಾಡಬೇಕು ಅಂತ ಹೇಳಲಾಗಿತ್ತು. ಮೊನ್ನೆಯ ಸಿಎಂ ನೇತ್ರತ್ವದ ಸಭೆಯಲ್ಲಿ ಸುಗ್ರಿವಾಜ್ಞೆ ಬದಲಿಗೆ ನೇರವಾಗಿ ಬಿಲ್ ತರಲು ನಿರ್ಧಾರ ಮಾಡಲಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಬಿಲ್ ತನ್ನಿ ಅಂತ ಕಾನೂನು ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂದರು.