ಜಿಲ್ಲೆಯಲ್ಲಿ ಮಳೆ ಅವಾಂತರ ನಿಲ್ಲದೇ ಮುಂದುವರೆದಿದ್ದು, ಹಳ್ಳ ದಾಟಲು ಹೋಗಿ ಮತ್ತೊಂದು ಕೋಣ ನೀರುಪಾಲಾಗಿರುವ ಘಟನೆ ಕಳಸ ತಾಲೂಕಿನ ಮಾವಿನ ಹೊಲ ಬಳಿ ನಡೆದಿದೆ. ರಭಸವಾದ ಹಳ್ಳದಲ್ಲಿ ಜನರ ಕಣ್ಣೆದುರೇ ಕೋಣ ಕೊಚ್ಚಿ ಹೋಗಿದೆ. ಕಳೆದ ಎರಡು ವಾರಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಕಳಸ ತಾಲೂಕಿನಲ್ಲೇ ಮಳೆಯ ಆರ್ಭಕ್ಕೆ ಮೂರು ಜಾನುವಾರುಗಳು ಬಲಿಯಾಗಿವೆ.