ಬೆಂಗಳೂರು ಉತ್ತರ: ಶಾಸಕ ಪರಣ್ಣ ಮನವಳ್ಳಿ 84 ಮನೆ ಉರುಳಿಸಿದ್ದಾರೆ: ನಗರದಲ್ಲಿ ಛಲವಾಧಿ ನಾರಾಯಣಸ್ವಾಮಿ
ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಸರ್ಕಾರ ಯಾವ ಕಾರಣಕ್ಕೆ ಪ್ರಜಾಪ್ರಭುತ್ವ ದಿನ ಆಚರಿಸ್ತಿದ್ದಾರೆ ಗೊತ್ತಿಲ್ಲ. ಅದನ್ನ ನಾನು ಧಿಕ್ಕರಿಸಿ ಕಾರ್ಯಕ್ರಮಕ್ಕೆ ಹೋಗ್ತಿಲ್ಲ. ಸಿಂದಗಿಯಲ್ಲಿ 84 ಮನೆ ಉರುಳಿಸಿದ್ದಾರೆ. ಸ್ಥಳೀಯ ಶಾಸಕ ಪರಣ್ಣ ಮನವಳ್ಳಿ ಅವರು ದಲಿತರ ಮನೆ ಉರುಳಿಸಿದ್ದಾರೆ ಎಂಬ ವಿಷಯ ಬಂದಿದೆ. ಕಾಡುಗೋಡಿಯಲ್ಲಿ 512 ಎಕರೆ ಭೂಮಿಯನ್ನ ಕಿತ್ತುಕೊಂಡಿದ್ದಾರೆ. ಈಗ ಬೆಲೆ ಬಾಳುವ ಜಮೀನು ಅಂತ ಜಮೀನನ್ನ ಕಬಳಿಸಲು ಹೊರಟಿದ್ದಾರೆ. ದಲಿತರೇ ಇರೋ ಆ ಜಾಗದಲ್ಲಿ, ಅವರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ. ಸಿಎಂ ಗಮನಕ್ಕೆ ತಂದಿದ್ದು, ಡಿಐಜಿಗೆ ದೂರು ಕೊಡಿ ಅಂದ್ರು. ದೂರು ಕೊಟ್ರೆ ಅವರು DCRಗೆ ನೀಡಿದ್ದಾರೆ.