ಚಿಕ್ಕಮಗಳೂರು: ನೂರಾರು ಅಡಕೆ ಮರ ಸಿಗಿದು ಹಾಕಿದ ಕಾಡಾನೆ.! ಕಂಗಾಲಾಗಿರೋ ಕರಗಣೆಯ ರೈತರು.!
ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಯ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಚಿಕ್ಕಮಗಳೂರು ತಾಲೂಕಿನ ಕರಗಣಿ ಗ್ರಾಮದ ಶಂಕರ್ ಗೌಡ ಎಂಬುವವರ ಅಡಿಕೆ ತೋಟದಲ್ಲಿ 15 ರಿಂದ 20 ವರ್ಷದ ನೂರಾರು ಅಡಿಕೆ ಮರಗಳನ್ನು ಕಾಡಾನೆ ಪೀಸ್ ಪೀಸ್ ಮಾಡಿ ಸಿಗಿದು ಹಾಕಿದೆ. ಕಳೆದ ಒಂದು ವಾರದಿಂದ ಕಾಡಾನೆ ನಿರಂತರವಾಗಿ ಉಪಟಳ ನೀಡುತ್ತಿದ್ದು ಕೂಡಲೇ ಕಾಡಾನೆಯನ್ನು ಸೆರೆಹಿಡಿದು, ಸ್ಥಳಾಂತರ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.