ಡಿಸಿಎಂ ಡಿ ಕೆ ಶಿವಕುಮಾರ್ ಅವರು ಕಬ್ಬನ್ ಪಾರ್ಕ್ ನಲ್ಲಿ ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಗಳೂರು ನಡಿಗೆ ವೇಳೆ ಹಿಂದೆ ಮೈಸೂರು ಸಂಸ್ಥಾನದ ಒಡೆಯರಾಗಿದ್ದ ಚಾಮರಾಜ ಒಡೆಯರ್, ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಪ್ರತಿಮೆಗೆ ನಮನ ಸಲ್ಲಿಸಿದರು. ಹಾಗೂ ಹಿರಿಯರು, ಕಿರಿಯರ ಜತೆ ಸಂವಾದ ಮಾಡಿದರು. ಸಮಸ್ಯೆಗಳನ್ನು ಆಲಿಸಿದರು. ಸಲಹೆ ಪಡೆದರು. ಹಿರಿಯರು, ಮಕ್ಕಳ ಜತೆ ಸೆಲ್ಫಿ ತೆಗೆಸಿಕೊಂಡರು. ವಾಯುವಿಹಾರಿ ಜತೆ ಬಂದಿದ್ದ ಸೈಬೆರಿಯನ್ ಹಸ್ಕಿ ಶ್ವಾನದ ಮೈ ದಡವಿದರು. ಸಂಗೀತ ಕಚೇರಿ ನಿರತ ವಾದ್ಯಗಾರ್ತಿಗೆ ಶುಭ ಕೋರಿದರು.