ಶ್ರೀನಿವಾಸಪುರ: ಪುಲಗೂರಕೋಟೆ ಗ್ರಾಮದ ಸರ್ಕಾರಿ ಕಚೇರಿಗಳಲ್ಲಿ ಯುಪಿಎಸ್ ಬ್ಯಾಟರಿಗಳ ಸರಣಿ ಕಳ್ಳತನ!
ಪುಲಗೂರಕೋಟೆ ಗ್ರಾಮದ ಸರ್ಕಾರಿ ಕಚೇರಿಗಳಲ್ಲಿ ಯುಪಿಎಸ್ ಬ್ಯಾಟರಿಗಳ ಸರಣಿ ಕಳ್ಳತನ! ಎಲೆಕ್ಟ್ರಾನಿಕ್ ವಸ್ತುಗಳನ್ನೇ ಟಾರ್ಗೆಟ್ ಮಾಡಿದ ಖದೀಮರು, ಸರ್ಕಾರಿ ಕಚೇರಿಗಳಲ್ಲಿ ಯುಪಿಎಸ್ ಬ್ಯಾಟರಿಗಳ ಕಳ್ಳತನ! ಶ್ರೀನಿವಾಸಪುರ ತಾಲ್ಲೂಕಿನ ಪುಲಗೂರಕೋಟೆ ಗ್ರಾಮದಲ್ಲಿ ಸರಣಿ ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ವಿವಿಧ ಸರ್ಕಾರಿ ಕಚೇರಿಗಳಲ್ಲಿನ ಯುಪಿಎಸ್ (UPS) ಬ್ಯಾಟರಿಗಳನ್ನು ಕಳ್ಳರು ದೋಚಿದ್ದಾರೆ. ಬುಧವಾರ ರಾತ್ರಿ ಸಮಯದಲ್ಲಿ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿದ್ದು, ಪುಲಗೂರಕೋಟೆ ಗ್ರಾಮದಲ್ಲಿರುವ ಪ್ರಮುಖ ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಗ್ರಾಮದ ಗ್ರಾಮ ಪಂಚಾಯತಿ