ಮಳವಳ್ಳಿ : ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ರಸ್ತೆ ವಿಭಜಕ ಗಳಿಗೆ ಡಿಸೆಂಬರ್ 16 ರಿಂದ 21ರ ವರೆಗೆ ಯಾವುದೇ ವ್ಯಾನರ್, ಬಂಟಿಂಗ್ಸ್ ಗಳನ್ನು ಕಟ್ಟದಂತೆ ನಿರ್ಬಂಧಿಸಿ ಪುರಸಭೆಯ ಮುಖ್ಯಾ ಧಿಕಾರಿಗಳು ಹಾಗೂ ಪಟ್ಟಣದ ಪೊಲೀಸ್ ಇನ್ಸ್ ಪೆಕ್ಟರ್ ಅವರು ಆದೇಶ ಹೊರಡಿಸಿದ್ದಾರೆ. ಬುಧವಾರ ಬೆಳಿಗ್ಗೆ 11.30 ರ ಸಮಯದಲ್ಲಿ ಪ್ರಕಟಣೆ ಹೊರಡಿಸಿರುವ ಅವರು 16 ರಿಂದ 21 ರ ವರೆಗೆ ಪಟ್ಟಣ ದಲ್ಲಿ ಶಿವರಾತ್ರಿ ಶಿವಯೋಗಿಗಳ ಜಯಂತೋತ್ಸವ ನಡೆಯುತ್ತಿದ್ದು ರಾಷ್ಟ್ರಪತಿಗಳು ರಾಜ್ಯಪಾಲರು ಮುಖ್ಯ ಮಂತ್ರಿಗಳು ಸೇರಿದಂತೆ ಹಲವಾರು ಗಣ್ಯಾತಿಗಣ್ಯರು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.