ಚಳ್ಳಕೆರೆ:-ಮೊಬೈಲ್ ವಾಟ್ಸಪ್ ಇನ್ಸ್ಟಾಗ್ರಾಂ ಫೇಸ್ಬುಕ್ ನಲ್ಲಿ ಲೋನು ನೀಡುತ್ತೇವೆ ಎಂದು ನಾವು ಬ್ಯಾಂಕಿನಿಂದ ಕರೆ ಮಾಡುತ್ತೇವೆ ಎಂದು ಮೋಸದ ಜಾಲ ಬೀಸಿ ಸಾರ್ವಜನಿಕರ ಹಣ ಲೂಟಿ ಮಾಡುವ ವಂಚಕರ ಸಂಖ್ಯೆ ಇತ್ತೀಚಿಗೆ ಜಾಸ್ತಿಯಾಗಿದೆ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಎಲ್ ಸೌಮ್ಯ ಹೇಳಿದರು. ಸೋಮವಾರ ಪಟ್ಟಣದ ಮೈರಾಡ ಕಚೇರಿಯಲ್ಲಿ ಲೀಡ್ ಬ್ಯಾಂಕ್ ಚಿತ್ರದುರ್ಗ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಅಮೂಲ್ಯ ಆರ್ಥಿಕತ ಸಾಕ್ಷರತಾ ಕೇಂದ್ರ,ಕೆನರಾ ಆರ್ಥಿಕ ಸಲಹಾ ಟ್ರಸ್ಟ್ ಬೆಂಗಳೂರು ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಜಾಗೃತಿ ಕುರಿತಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.