ಬೆಂಗಳೂರು ಉತ್ತರ: ಬಿಲ್ ಪಾವತಿ ಆಗದೇ ಹೋದರೆ ರಾಜ್ಯಪಾಲರ ಮೊರೆ: ನಗರದಲ್ಲಿ ಮಂಜುನಾಥ್
ಡಿಸಿಎಂ ಜೊತೆಗಿನ ಸಭೆ ಬಳಿಕ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಸದಾಶಿವನಗರದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ರಾಜ್ಯ ಗುತ್ತಿಗೆದಾರರ ಅಧ್ಯಕ್ಷ ಮಂಜುನಾಥ್ ಅವರು, ನಾವು ಇವತ್ತು ಸುದ್ದಿ ಗೋಷ್ಠಿ ಮಾಡಿದ್ದು ಸರಿ ಇದೆ. ಡಿಸೆಂಬರ್ ಒಳಗೆ ಬಿಲ್ ಕ್ಲೀಯರ್ ಮಾಡ್ತೇವೆ ಅಂತಾ ಹೇಳಿದ್ದಾರೆ. ಸಿಎಂ ಜೊತಗೆ ಸಭೆ ಮಾಡಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಬಿಲ್ ಬಾಕಿ ಆಗದಿದ್ದರೆ ರಾಜ್ಯಪಾಲರ ಮೋರೆ ಹೋಗ್ತೇವೆ. ನಾವು ಯಾವ ಆರೋಪ ಮಾಡಿಲ್ಲ .. ಕಮಿಷನ್ ಇರುತ್ತೆ, ನಾವು ಬಂದಿರೋದು ಪೇಮೆಂಟ್ ಕೇಳೋದಕ್ಕೆ. 5೦ ಲಕ್ಷ ನಾಲ್ಕು ನಿಗಮಗಳಿಗೆ ಪೇಮೆಂಟ್ ಕೊಡ್ತೇವೆ ಅಂದಿದ್ದಾರೆ. 33 ಸಾವಿರ ಕೋಟಿ ಬಿಡುಗಡೆ ಮಾಡಿಲ್ಲ ಅಂದ್ರೆ ಹೋರಾಟ ಖಂಡಿತಾ ಎಂದರು.