ಹದಗೆಟ್ಟ ರಸ್ತೆಗಳನ್ನು ಸರಿಪಡಿಸಿ ನಮ್ಮ ಕರ್ನಾಟಕ ಸೇನೆ ಒತ್ತಾಯ ಮಾಲೂರು : ಹದಗೆಟ್ಟ ರಸ್ತೆಗಳನ್ನು ಸರಿಪಡಿಸಿ ಗ್ರಾಮೀಣ ಭಾಗದ ಜನ ಸಾಮಾನ್ಯರು ಮತ್ತು ವಾಹನ ಸವಾರರ ಓಡಾಟಕ್ಕೆ ಅನುಕೂಲ ಕಲ್ಪಿಸಿಕೊಡ ಬೇಕೆಂದು ನಮ್ಮ ಕರ್ನಾಟಕ ಸೇನೆಯ ತಾಲ್ಲೂಕು ಅಧ್ಯಕ್ಷ ಮಾದನಹಟ್ಟಿ ರವಿಕುಮಾರ್ ಒತ್ತಾಯಿಸಿದ್ದಾರೆ. ಪಟ್ಟಣದ ಜೆ ಎಸ್ ಎಸ್ ಕಾಲೇಜು ಮುಂದೆ ರಸ್ತೆಯಲ್ಲಿ ನಮ್ಮ ಕರ್ನಾಟಕ ಸೇನೆಯ ತಾಲ್ಲೂಕು ಸಮಿತಿ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರಸ್ತೆ ತಡೆದು ಪ್ರತಿಭಟನೆಯ ನಾಯಕತ್ವ ವಹಿಸಿ ಮಾತನಾಡಿದರು. ಮಾಲೂರಿನಿಂದ ಗುಡ್ನಹಳ್ಳಿ,ಕೋಡೂರು, ಕಾಟೇರಿ ಸೊಣ್ಣಹಳ್ಳಿ ಮಾರ್ಗದ ಗ್ರಾಮಗಳ ರಸ್ತೆ ಹಳ್ಳ ಕೊಳ್ಳ ಗಳಿಂದ ಕೂಡಿದ್ದು ಪ್ರತಿ ನಿತ್ಯ ಪ್ರಮಾಣ ಮಾಡುವ ಶಾಲಾ ವಿದ್ಯಾರ್ಥಿ