ಬೆಂಗಳೂರು ಉತ್ತರ: ಭ್ರಷ್ಟ ಅಧಿಕಾರಿಗಳಿಗೆ ಶಾಕ್, ರಾಜ್ಯದಲ್ಲಿ ನಾಲ್ಕು ಕಡೆ ಲೋಕಾಯುಕ್ತ ದಾಳಿ
ರಾಜ್ಯಾದ್ಯಂತ ನಾಲ್ಕು ಕಡೆ ಲೋಕಾಯುಕ್ತ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ಕೊಟ್ಟಿದೆ. ಕೋಲಾರ, ಯಾದಗಿರಿ, ದಾವಣಗೆರೆ ಹಾಗೂ ಬೆಂಗಳೂರಿನಲ್ಲಿ ದಾಳಿ ಪರಿಶೀಲನೆ ನಡೆಸಲಾಗ್ತಿದೆ. ಮೇ 8 ಬೆಳಗ್ಗೆಯಿಂದಲೇ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸ್ತಿದ್ದಾರೆ. ಬೆಂಗಳೂರು ಜಲಮಂಡಳಿಯ ಅಸಿಸ್ಟೆಂಟ್ ಎಸ್ಕ್ಯೂಟಿವ್ ಇಂಜನಿಯರ್ ಶ್ರೀನಿವಾಸ್ ಮೂರ್ತಿ, ಕೋಲಾರದ ಸರ್ವೇ ಸೂಪರ್ವೈಸರ್ ಸುರೇಶ್ ಬಾಬು, ಯಾದಗಿರಿಯ ತಾಲ್ಲೂಕು ಆರೋಗ್ಯಾಧಿಕಾರಿ ರಾಜ ವೆಂಕಟಪ್ಪ ನಾಯಕ್, ದಾವಣಗೆರೆಯ ಒಳಚರಂಡಿ ಇಲಾಖೆಯ ಸಹಾಯಕ ಎಂಜಿನಿಯರ್ ಗೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗ್ತಿದೆ. ಬೆಳಗ್ಗೆ 7ಗಂಟೆಯಿಂದ ದಾಳಿ ಮುಂದುವರೆದಿದೆ.