ಬೆಂಗಳೂರು ಉತ್ತರ: ಏರ್ ಪೋರ್ಟ್ ನಲ್ಲಿ ನಮಾಜ್; ಏರ್ಪೋರ್ಟ್ ಖಾಸಗಿಯಾ ? ಸರ್ಕಾರಿನಾ ?: ನಗರದಲ್ಲಿ ಪ್ರಿಯಾಂಕ ಖರ್ಗೆ
ಏರ್ ಪೋರ್ಟ್ ನಲ್ಲಿ ನಮಾಜ್ ಮಾಡಿದ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಸಂಜೆ 5:30 ರ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಅದಕ್ಕೆ ಸ್ಟೇ ತಂದಿದ್ದು ಯಾರು ? ಪ್ರಾರ್ಥನೆ ಮಾಡಲು ಸಪರೇಟ್ ಆದ ಕೊಠಡಿ ಇದ್ದೆ ಇರುತ್ತದೆ. ಯಾವುದೇ ಧರ್ಮಕ್ಕಾದರೂ ಇರುತ್ತದೆ. ದೆಹಲಿ ಹಾಗೂ ಗುಜರಾತ್ ಏರ್ಪೋರ್ಟ್ ನಲ್ಲಿ ಎಲ್ಲರೂ ಗರ್ಭ ಮಾಡಿದರು. ಇವರು ಪ್ರಯರ್ ಮಾಡ್ತಾ ಇದ್ದಾರೆ. ಏರ್ಪೋರ್ಟ್ ಖಾಸಗಿಯಾ ಅಥವಾ ಸರ್ಕಾರಿನಾ ಅವರವರು ರೂಲ್ಸ್ ಮಾಡಿರುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಏನೂ ಮಾಡಬಾರದು ಅಂತ ನಾವು ರೂಲ್ ಮಾಡಿದಾಗ ಸ್ಟೇ ತಂದವರು ಯಾರು ಎಂದು ಪ್ರಶ್ನೆ ಮಾಡಿದರು.