ಕನಕಗಿರಿ: ನವಲಿ ಗ್ರಾಮದಲ್ಲಿ ಹಾಲು ಬಿದ್ದ ರೈಸ್ ಟೆಕ್ನಾಲಜಿ ಪಾರ್ಕ್ 135 ಕೋಟಿ ನೀರಲ್ಲಿ ಹೋಮ
ಗಂಗಾವತಿ ಕಾರಟಗಿ ಭಾಗದ ಭತ್ತ ಬೆಳೆದ ರೈತರಿಗೆ ಅನುಕೂಲವಾಗಲಿ ಎಂದು 135 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ರೈಸ್ ಟೆಕ್ನಾಲಜಿ ಪಾರ್ಕ್ ಸಂಪೂರ್ಣವಾಗಿ ಹಾಳು ಬಿದ್ದಿದೆ. ಕಳೆದ 12 ವರ್ಷಗಳಿಂದ ಯಾವುದೇ ಉಪಯೋಗಕ್ಕೆ ಬಾರದೆ ರೈಸ್ ಟೆಕ್ನಾಲಜಿ ಪಾರ್ಕ್ ಜಾಲಿ ಗಿಡಗಳು ಬೆಳೆದು ಹಾಳಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿಲ್ಲ ಎಂದು ಸ್ಥಳೀಯ ರೈತರು ಆರೋಪಿಸುತ್ತಿದ್ದಾರೆ ಕೂಡಲೇ ಈ ರೈಸ್ ಟೆಕ್ನಾಲಜಿ ಪಾರ್ಕನ್ನ ಉದ್ಘಾಟನೆ ಮಾಡಬೇಕು ಮತ್ತು ರೈತರ ಅನುಕೂಲಕ್ಕಾಗಿ ಮುಕ್ತಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.