ಕೋಲಾರ: ಹಳೆ ಬಸ್‌ನಿಲ್ದಾಣಕ್ಕೆ ಭೇಟಿ ನೀಡಿ ಹೂ ಮಾರಾಟಗಾರರ,ಹೂ ಬೆಳೆಗಾರರ ಸಮಸ್ಯೆ ಆಲಿಸಿದ ಸಂಸದ ಮಲ್ಲೇಶ ಬಾಬು#
Kolar, Kolar | Oct 10, 2025 ಹಳೆ ಬಸ್‌ನಿಲ್ದಾಣದಲ್ಲಿ ಹೂ ಮಾರಾಟಗಾರರ ಹಾಗೂ ಹೂ ಬೆಳೆಗಾರರ ಸಮಸ್ಯೆ ಆಲಿಸಲು ಮಾರುಕಟ್ಟೆಗೆ ಭೇಟಿ ನೀಡಿದ ಸಂಸದರಾದ ಮಲ್ಲೇಶ ಬಾಬು ರವರು ಮಾರುಕಟ್ಟೆಯನ್ನು ವಿಕ್ಷಣೆ ಮಾಡಿ ಹೂ ಬೆಳೆಗಾರರಿಗೆ ತೊಂದರೆ ನೀಡದಂತೆ ನಗರಸಭೆ ಕಮಿಷನರ್ ನವೀನ್ ರವರಿಗೆ ಶುಕ್ರವಾರ ಸೂಚನೆ ನೀಡಿ ಮಾರುಕಟ್ಟೆಗೆ ಮೂಲಭೂತ ಸೌರ್ಕಯಗಳನ್ನು ಒದಗಿಸುವಂತೆ ಸೂಚನೆ ನೀಡಿದರು. ಮೂರು ದಿನದ ಹಿಂದೆ ಹೂ ಮಾರುಕಟ್ಟೆಗೆ ಭೇಟಿ ನೀಡಿದ ನಗರಸಭೆ ಕಮೀಷನರ್ ನವೀನ್ ರವರು ರೈತರ ಹೂ ಹರಾಜು ಹಾಕದಂತೆ ಸೂಚನೆ ನೀಡಿದ್ದು ಇದ್ದರಿಂದ ಕೆರಳಿದ್ದ ರೈತರು ವ್ಯಾಪಾರಸ್ಥರು ರೈತಸಂಘದವರು ಹೂವನ್ನು ರಸ್ತೆಗೆ ಸುರಿಯುವ ನಿರ್ಧಾರ ಕೈಗೊಂಡಿರುವ ವಿಷಯ ತಿಳಿದು ಮಾರುಕಟ್ಟೆಗೆ ಬಂದ ಸಂಸದರು ಹೂ ಬೆಳೆಗಾರರ ರೈತರ ಜೊತೆ ಚರ್ಚೆ ಮಾಡಿದರು.