ಕಡಬ: ಆಲಂಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಿನ ರಕ್ಷಣೆ
ಅನುಮತಿ ಇಲ್ಲದೇ ಗೋ ಸಾಗಾಟ ನಡೆಸಿದ್ದು, ಕಡಬ ಪೊಲೀಸರು ವಿಚಾರಣೆ ನಡೆಸಿ ಕೋರ್ಟಿಗೆ ದಂಡ ಕಟ್ಟಿಸಿ, ಗೋವನ್ನು ಗೋಶಾಲೆಗೆ ಹಸ್ತಾಂತರಿಸಿದ ಘಟನೆ ಆಲಂಕಾರಿನಲ್ಲಿ ನಡೆದಿದೆ. ಅಲಂಕಾರು ನಾಡ್ತಿಲದಿಂದ ಪೆರಾಬೆಯ ಸುರುಳಿ ಭಾಗಕ್ಕೆ ಜಾನುವಾರು ಸಾಗಿಸುತ್ತಿದ್ದ ಸಂದರ್ಭದಲ್ಲಿ ಆಲಂಕಾರಿನಲ್ಲಿ ಸಾರ್ವಜನಿಕರು ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಡಬ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿ ವಾಹನವನ್ನು ವಶಕ್ಕೆ ಪಡೆದು, ಗೋವನ್ನು ಗೋಶಾಲೆಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.