ಕಾಂಗ್ರೆಸ್ ಮುಖಂಡ ಎಸ್ ಮನೋಹರ್ ಅವರು ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಅವಹೇಳನಕಾರಿ ಭಾಷಣ ಹಿನ್ನೆಲೆ, ಜನಾರ್ದನ ರೆಡ್ಡಿ ವಿರುದ್ಧ ಪ್ರತಿಭಟನೆ ನಡೆಸಿದರು. ಜನಾರ್ದನ ರೆಡ್ಡಿ ಪಾರಿಜಾತ ನಿವಾಸದೆದರು ಪ್ರತಿಭಟನೆ ಮಾಡಲಾಗಿದ್ದು, ರೆಡ್ಡಿ ನಿವಾಸಕ್ಕೆ ಕಾಂಗ್ರೆಸ್ ಮುಖಂಡರ ಮುತ್ತಿಗೆ ಯತ್ನ ಹಾಕಿದ್ದಾರೆ. ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ಈ ಪ್ರತಿಭಟನೆ ಮಾಡಲಾಗಿದೆ. ಪೋಲಿಸರು ಕಾಂಗ್ರೆಸ್ ಮುಖಂಡರನ್ನು ವಶಕ್ಕೆ ಪಡೆದರು ಇದೇ ವೇಳೆ ಮಾತನಾಡಿದ ಅವರು, ಜನಾರ್ಧನ್ ರೆಡ್ಡಿ ನಿಜವಾದ ಗಂಡಸಾಗಿದ್ರೆ ನಮ್ಮ ಎದುರು ಬರಲಿ, ರಾಜ್ಯದ ಸಂಪತ್ತು ಲೂಟಿ ಮಾಡಿದವನು ಆತ. ಅವನು ಡಿಕೆ ಶಿವಕುಮಾರ್ ಅವರನ್ನ ಕ್ಷಮೆ ಕೋರಬೇಕು. ನಮ್ಮೆದರು ಬರಲಿ ತಾಕತ್ತಿದ್ದರೆ