ಬಳ್ಳಾರಿ ನಗರದ ಹೊರವಲಯದ ತಾಳೂರು ರಸ್ತೆಯ ಕಾಲುವೆ ಎಡಭಾಗದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶ್ರೀನಿವಾಸ್ ಹಾಗೂ ಆರೋಗ್ಯದಾಸ್ ಎಂದು ಗುರುತಿಸಲಾಗಿದೆ. ಆರೋಪಿಗಳು ಸಾರ್ವಜನಿಕರಿಂದ ಹಣ ಸಂಗ್ರಹಿಸಿ, 1 ರೂಪಾಯಿಗೆ 80 ರೂಪಾಯಿ ನೀಡುವುದಾಗಿ ಆಮಿಷವೊಡ್ಡಿ ಮಟ್ಕಾ ಬರೆಯುತ್ತಿದ್ದರು ಎನ್ನಲಾಗಿದೆ. ಪೊಲೀಸರ ದಾಳಿಯ ವೇಳೆ ಆರೋಪಿಗಳಿಂದ ₹5,010 ನಗದು ಹಣ, ಎರಡು ಮಟ್ಕಾ ಪಟ್ಟಿಗಳು ಹಾಗೂ ಪೆನ್ ಅನ್ನು ವಶಪಡಿಸಿಕೊಳ್ಳಲಾಗಿದೆ.