ಮಸ್ಕಿ: ರಾಜ್ಯ ಹೆದ್ದಾರಿ ತೆಡೆದು ವಿದ್ಯಾರ್ಥಿಗಳಿಂದ ಪ್ರತಿಭಟನೆ
Maski, Raichur | Oct 29, 2025 ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಕೋಟೆಕಲ್ ಗ್ರಾಮದ ಬಳಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಸಾರಿಗೆ ಬಸ್ ನಿಲ್ಲದ ಕಾರಣ ರಸ್ತೆಗೆಇಳಿದು ಪ್ರತಿಭಟನೆ ಮಾಡಿದ ಘಟನೆ ಜರುಗಿದೆ. ಪ್ರತಿನಿತ್ಯ ಶಾಲೆಗೆ ತಡವಾಗಿ ಹೋಗುತ್ತಿದ್ದೇವೆ, ಇದರಿಂದ ಶಾಲೆಯಲ್ಲಿ ವಿದ್ಯ ಕಲಿಯಲು ಸಮಸ್ಯೆಯಾಗುತ್ತಿದ್ದು ಸಾರಿಗೆ ಬಸ್ಸುಗಳು ಗ್ರಾಮದಲ್ಲಿ ನೀಡುಗಡೆ ಮಾಡುತ್ತಿಲ್ಲ. ಬಸ್ ನಿಲ್ಲಿಸುವವರೆಗೂ ಪ್ರತಿಭಟನೆ ಹಿಂದೆ ತೆಗೆದುಕೊಳ್ಳುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು. ಕೊನೆಗೆ ನಿಯಂತ್ರಣ ಅಧಿಕಾರಿ ಬಂದು ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದಿದ್ದಾರೆ.