ಬೆಂಗಳೂರು ಉತ್ತರ: ಗುತ್ತಿಗೆದಾರರ ಬಿಲ್ ಆದಷ್ಟು ಕ್ಲೀಯರ್ ಮಾಡಿದ್ದೇವೆ: ನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್
ಗುತ್ತಿಗೆದಾರರ ಸಭೆ ಬಳಿಕ ಶನಿವಾರ ರಾತ್ರಿ 8:30 ರ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆಶಿವಕುಮಾರ್ ಅವರು, ಅವರು ಹೈಕಮಾಂಡ್ನ ಮೊದಲು ಹೋಗಿ ಭೇಟಿ ಮಾಡಲಿ, ನಾನು ಆದಷ್ಟು ಕ್ಲಿಯರ್ ಮಾಡಿದ್ದೇನೆ. ಯಡಿಯೂರಪ್ಪ ಕಾಲದಲ್ಲಿ, ಬೊಮ್ಮಾಯಿ ಕಾಲದಲ್ಲಿ ಬಜೆಟ್ ಇಲ್ಲದೇ ಕೆಲಸ ಕೊಟ್ಟಿದ್ದಾರೆ. ನಾನು ಆದಷ್ಟು ಕ್ಲೀಯರ್ ಮಾಡಿದ್ದೇನೆ. ಈಗ ಒಂದೊಂದು ಡಿಪಾರ್ಟ್ಮೆಂಟ್ನಲ್ಲಿ 50ಕೋಟಿ 60 ಕೋಟಿ ಇದೆ. ರಾಜ್ಯದ ಉದ್ದಗಲಕ್ಕೂ ಗುತ್ತಿಗೆದಾರರು ಇದ್ದಾರೆ. ಪರ್ಸಂಟೇಜ್ ಬಗ್ಗೆ ಮಾತಾಡಿದ್ದಾರೆ. ಅದನ್ನ ಅಫೀಡವಿಟ್ ಫೈಲ್ ಮಾಡಿ ಕಂಪ್ಲೇಂಟ್ ಮಾಡೋಣ, ಇನ್ವೆಸ್ಟಿಗೇಷನ್ ಮಾಡೋಣ ಎಂದಿದ್ದೇನೆ.ಅದಕ್ಕೆ ಅವರು ನಾವ್ ಹಾಗೆ ಹೇಳಿಲ್ಲ ಎನ್ನುತ್ತಾರೆ. ಸರ್ಕಾರನ ಯಾರೂ ಹೆದರಿಸೊಕಾಗಲ್ಲ,ಅವರಿಗೆ ಏನ್ ಸಹಾಯ ಮಾಡಬೇಕು