ಅವಿಶ್ವಾಸ ನಿರ್ಣಯ ಕುರಿತಂತೆ, ವಿಧಾನಸೌಧದಲ್ಲಿ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಮಾತನಾಡಿ, ಅವಿಶ್ವಾಸ ನಿರ್ಣಯ ಮಂಡಿಸಲಿ. ಅವರು ಯಾವುದೇ ವಿಚಾರದ ಬಗ್ಗೆ ಮಾತನಾಡಲಿ ನಾವು ಉತ್ತರ ಕೊಡೋಕೆ ಸಿದ್ದರಿದ್ದೇವೆ. ನಾನು 140 ಜನ ಇದ್ದೇವೆ, ಅವರು ಅವಿಶ್ವಾಸ ಮಂಡಿಸೋದಿದ್ರೆ ಮಂಡಿಸಲಿ. ಕಬ್ಬು ಇರಲಿ, ಮೆಕ್ಕೆಜೋಳ ಎಲ್ಲವೂ ಕೇಂದ್ರ ಸರ್ಕಾರ ಮಾಡಬೇಕಾಗಿರೋದು. ಆದ್ರ ಬಗ್ಗೆ ಯಾಕೆ ಇವರು ಮಾತಡೋದಿಲ್ಲ!, ರಾಜ್ಯದ ರೈತರ ಬಗ್ಗೆ ಕಾಳಜಿ ಇದ್ರೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಿ ಎಂದರು.