ಮದ್ದೂರು: ಭಾರತೀನಗರದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಎತ್ತಿನ ಗಾಡಿ,ಕಾರು ಹಾಗೂ ಬೈಕ್ ಡಿಕ್ಕಿ, ಬೈಕ್ ಸವಾರ ಸೇರಿದಂತೆ ಮಕ್ಕಳಿಗೆ ಗಂಭೀರ ಗಾಯ
Maddur, Mandya | Sep 20, 2025 ಮದ್ದೂರು ತಾಲೂಕು ಭಾರತೀನಗರದ ಹೆದ್ದಾರಿಯಲ್ಲಿ ಕೆಎಸ್ಆರ್ಟಿಸಿ ಬಸ್ ಬ್ರೇಕ್ ಫೇಲ್ ನಿಂದ ಎತ್ತಿನಗಾಡಿಗೆ, ಕಾರು, ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಹಾಗೂ ಬೈಕ್ ನಲ್ಲಿದ್ದ ಮಕ್ಕಳಿಗೆ ಗಂಭೀರ ಗಾಯವಾಗಿದೆ . ಕರಡಕೆರೆ ಗ್ರಾಮದ ರಾಜಣ್ಣ, ಅವರ ಮಕ್ಕಳಾದ ಧನುಷ್ ಹಾಗೂ ಗಾನವಿ ಎಂಬುವರಿಗೆ ಗಂಭೀರವಾಗಿ ಗಾಯಗೊಂಡಿರುವವರು. ಕೆಎಸ್ಆರ್ಟಿಸಿ ಬಸ್ ಮಳವಳ್ಳಿ ಕಡೆಯಿಂದ ಮದ್ದೂರಿಗೆ ಹೋಗುವಾಗ ಮಂಡ್ಯ ರಸ್ತೆಯಿಂದ ಬರುತ್ತಿದ್ದ ಬುಲೆಟ್ ಸವಾರನಿಗೆ ತರಿದಂತೆ ಮಂಡ್ಯ ರಸ್ತೆಯಿಂದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಹೋಗುತ್ತಿದ್ದ ಎತ್ತಿನಗಾಡಿಗೆ, ಆಲು ಭುಜನಹಳ್ಳಿ ಗ್ರಾಮದಿಂದ ಮಂಡ್ಯ ರಸ್ತೆಗೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.