ಮಾಲೂರು: ರಾಜೇನಹಳ್ಳಿ ಗ್ರಾಮ ಪಂಚಾಯತಿ ಒಳಗೆ ವಿಷ ಸೇವಿಸುವಂತೆ ಆತ್ಮಹತ್ಯೆಗೆ ಯತ್ನಿಸಿದ ದಂಪತಿ
Malur, Kolar | Sep 18, 2025 ಗ್ರಾಮ ಪಂಚಾಯತಿ ಒಳಗೆ ದಂಪತಿ ವಿಷ ಸೇವಿಸುವಂತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ರಾಜೇನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಗುರುವಾರ ನಡೆದಿದೆ.30 ವರ್ಷದಿಂದ ವಾಸವಿದ್ದ ಮನೆಯನ್ನು ಬೇರೆಯವರಿಗೆ ಅಕ್ರಮವಾಗಿ PDO ಖಾತೆ ಮಾಡಿದ ಆರೋಪ ಮಾಡಿದ್ದು,ದೊಡ್ಡಕಲ್ಲಹಳ್ಳಿ ಗ್ರಾಮದ ಮಂಜುಳಾ ರಾಮಪ್ಪ ಎಂಬುವರ ಮನೆಯನ್ನು ಅಕ್ರಮವಾಗಿ PDO ಸೋಮೇಶ್ ಖಾತೆ ಮಾಡಿದ್ದಾರೆ, ಇ-ಖಾತೆ ಮಾಡಿಕೊಡುವುದಾಗಿ ಒಂದು ಲಕ್ಷ ಮುಂಗಡ ಹಣ ಪಡೆದು ಬೇರೆಯವರಿಗೆ ಖಾತೆ ಮಾಡಿರೊ ಆರೋಪಿಸಿ ರಾಜೇನಹಳ್ಳಿ ಗ್ರಾಮ ಪಂಚಾಯತಿ ಕಚೇರಿ ಒಳಗೆ ದಂಪತಿ ಧರಣಿ ಕೂತುವಿಷದ ಬಾಟಲ್ ಮುಂದೆ ಇಟ್ಟುಕೊಂಡಿದ್ದು, ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.