ನೆಲ ಮಂಗಲ: ಕೇಕ್ ಕಟ್ ಮಾಡಿಸುವೆನೆಂದು ಹೇಳಿ 15 ವರ್ಷದ ಬಾಲಕಿ ಮೇಲೆ ಯುವಕನೋರ್ವ ಅತ್ಯಾಚಾರವೆಸಗಿರುವ ದಾರುಣ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 9 ನೇ ತರಗತಿ ವ್ಯಾಸಾಂಗ ಮಾಡ್ತಿದ್ದ 15 ವರ್ಷದ ಬಾಲಕಿ ಮೇಲೆ ಖಾಸಗಿ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಯತೀಶ್ (27) ಎಂಬಾತ ಲೈಂಗಿಕ ದೌರ್ಜನ್ಯ ನಡೆಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹುಟ್ಟುಹಬ್ಬದ ನೆಪ ಮಾಡಿ ರಾಶಿ ಲೇಔಟ್ಟೆ ಕರೆದೊಯ್ದು ಕೇಕ್ ಕಟ್ ಮಾಡಿಸಿ ಯತೀಶ್ ನನ್ನನ್ನು ಬಲವಂತವಾಗಿ ತಬ್ಬಿಕೊಂಡು ನನ್ನ ಕೆನ್ನೆ ಮತ್ತು ಕತ್ತು ಎದೆಯ ಭಾಗವನ್ನು ಬಾಯಿಂದ ಕಚ್ಚಿ ಬಲವಂತವಾಗಿ ಅತ್ಯಾಚಾರ ಮಾಡಿರುವ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.