ಬಂಟ್ವಾಳ: ಮನೆಯಲ್ಲೇ ಮೈಸೂರು ದಸರಾ: ಬಿ.ಸಿ.ರೋಡ್ ದಂಪತಿಯ ಅಪರೂಪದ ಬೊಂಬೆ ವೈಭವ
ಬಿ.ಸಿ.ರೋಡ್ನಲ್ಲಿ ವಾಸವಾಗಿರುವ ನಂದಕುಮಾರ್ ದಂಪತಿ ತಮ್ಮ ಮನೆಯಲ್ಲಿ ಮೈಸೂರು ದಸರಾ ಹಾಗೂ ಜಂಬೂಸವಾರಿಯನ್ನು ಬೊಂಬೆಗಳ ಮೂಲಕ ಸುಂದರವಾಗಿ ಪ್ರದರ್ಶಿಸಿದ್ದಾರೆ. ಪ್ರತಿ ವರ್ಷ ಹೊಸ ಪರಿಕಲ್ಪನೆಯೊಂದಿಗೆ ನವರಾತ್ರಿ ಆಚರಿಸುವ ಇವರ ಈ ಪ್ರಯತ್ನ ಎಲ್ಲರ ಗಮನ ಸೆಳೆಯುತ್ತಿದೆ.