ಹುಕ್ಕೇರಿ: ಆದಿ ಕವಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ:ಹುಕ್ಕೇರಿ ಪಟ್ಟಣದಲ್ಲಿ ತಹಸಿಲ್ದಾರ ಬಲರಾಮ ಕಟ್ಟಿಮನಿ
ಅಕ್ಟೋಬರ್ 7 ರಂದು ಹುಕ್ಕೇರಿ ತಾಲೂಕಿನಲ್ಲಿ ಆದಿ ಕವಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಇಂದು ರವಿವಾರ 3 ಗಂಟೆಗೆ ಹುಕ್ಕೇರಿ ಪಟ್ಟಣದಲ್ಲಿ ತಹಸಿಲ್ದಾರ ಬಲರಾಮ ಕಟ್ಟಿಮನಿ ಮಾತನಾಡಿದರು ಹುಕ್ಕೇರಿ ತಾಲೂಕಾ ಆಡಳಿತ, ತಾಲೂಕು ಪಂಚಾಯತ ಮತ್ತು ಪರಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದ ಪೂರ್ವ ಭಾವಿ ಸಭೆಯನ್ನು ತಹಸಿಲ್ದಾರ ಬಲರಾಮ ಕಟ್ಟಿಮನಿ ಅಧ್ಯಕ್ಷತೆಯಲ್ಲಿ ಜರುಗಿತು ಸಭೆಯಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ, ಜಿಲ್ಲಾ ಜಾಗೃತಿ ಸಮಿತಿ ನಿರ್ದೆಶಕ ಕರೆಪ್ಪಾ ಗುಡೆನ್ನವರ, ರಮೇಶ ಹುಂಜಿ ಸಲಹೆ ಸೂಚನೆಯನ್ನು ನೀಡಿದರು.