ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದಲ್ಲಿ ಆರ್ ಎಸ್ ಎಸ್ ಪತಸಂಚಲನ
ಶ್ರೀನಿವಾಸಪುರ ಪಟ್ಟಣದಲ್ಲಿ ಆರ್ ಎಸ್ ಎಸ್ ಪತಸಂಚಲನ ರಾಷ್ಟ್ರಭಕ್ತಿ ಮತ್ತು ಶಿಸ್ತಿನ ಸಂಕೇತವಾಗಿ ಶುಕ್ರವಾರ ಶ್ರೀನಿವಾಸಪುರ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಬೃಹತ್ ಪಥಸಂಚಲನ ನಡೆಯಿತು. ಆರ್ಎಸ್ಎಸ್ನ ಸ್ವಯಂಸೇವಕರು ಗಣವೇಷಧಾರಿಯಾಗಿ ಪಟ್ಟಣದ ಬಾಲಕೀಯರ ಕಾಲೇಜು ಆವರಣದಿಂದ ಆರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಕೋಲಾರ ಜಿಲ್ಲೆಯ ಮಾವಿನ ತವರೂರು ಎಂದೇ ಖ್ಯಾತವಾಗಿರುವ ಶ್ರೀನಿವಾಸಪುರ ಪಟ್ಟಣದಲ್ಲಿ ಇಂದು ಆರ್.ಎಸ್.ಎಸ್. ಕಾರ್ಯಕರ್ತರ ಹೆಜ್ಜೆ ಸದ್ದು ಮೊಳಗಿತು. ನೂರಾರು ಸಂಖ್ಯೆಯ ಸ್ವಯಂಸೇವಕರು ಪೂರ್ಣ ಗಣವೇಷಧಾರಿಗಳಾಗಿ ಈ ಪಥಸಂಚಲನದಲ್ಲಿ ಭಾ