ಬೆಂಗಳೂರು ಉತ್ತರ: ಬಿಹಾರ ಚುನಾವಣೆ; ರಾಹುಲ್ ಗಾಂಧಿ ನೇತೃತ್ವದಲ್ಲಿ 100 ನೇ ಚುನಾವಣೆ ಸೋಲಾಗಲಿದೆ: ನಗರದಲ್ಲಿ ಆರ್.ಅಶೋಕ್
ಬಿಹಾರ ಚುನಾವಣೆ ಕುರಿತು ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಲ್ಲೇಶ್ವರಂನಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಬಿಹಾರದ ಪ್ರತಿಷ್ಠಿತ ಚುನಾವಣೆಯ ಮತ ಈಗ ಬಾಕ್ಸ್ ಲ್ಲಿ ಸೀಲಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶಾಂತಿಯುತ ಮತದಾನ ಆಗಿದೆ. ನಕ್ಸಲರು ಸಹ ಕ್ಯೂನಲ್ಲಿ ನಿಂತು ಮತದಾನ ಮಾಡಿದ್ದಾರೆ. ಅಮಿತ್ ಶಾ ನೇತೃತ್ವದಲ್ಲಿ ನಕ್ಸಲ್ ನಿಗ್ರಹ ಮಾಡಿದ್ದಾರೆ. ಬಿಹಾರದ ಚುನಾವಣೆ ಎಕ್ಸಿಟ್ ಪೋಲ್ ಬಂದಿದೆ. 12 ಸಂಸ್ಥೆಗಳು ರಿಸಲ್ಟ್ ಪ್ರೆಡಿಕ್ಷನ್ ಮಾಡಿದೆ. ಎಲ್ಲದರಲ್ಲೂ ಎನ್ ಡಿ ಎ ಮುಂದೆ ಇದೆ ಕಾಂಗ್ರೆಸ್ ಘಟಬಂಧನ ಹಿನ್ನಡೆ ಇದೇ. ರಾಹುಲ್ ವೋಟ್ ಚೋರ್ ಆಗಿದೆ ಎನ್ನುತ್ತಾರೆ. ಮಧ್ಯಾಹ್ನದ ಮೇಲೆ ಇವಿಎಂ ಬಗ್ಗೆ ದೂರುತ್ತಾರೆ.