ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ರಾಮಲಿಂಗಾರೆಡ್ಡಿ ಅವರು ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, 1956 ರಲ್ಲಿ ಎಲ್ಲ ಪ್ರದೇಶ ಬೇರೆ ಕಡೆ ಸೇರಿದ್ವು, ಕೊಡಗು,ದಕ್ಷಿಣ ಕನ್ನಡ,ಬಳ್ಳಾರಿ ಬೇರೆ ಕಡೆ ಸೇರಿದ್ವು. ಕನ್ನಡಿಗರು ಒಂದು ಕಡೆ ಇರಬೇಕೆಂಬ ತೀರ್ಮಾನ ಆಯ್ತು. ಎಲ್ಲಾ ಪ್ರದೇಶಗಳ ಅಭಿವೃದ್ಧಿಯಾಗ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು. ಎರಡು ಮಾಡಿ ಅಂತ ಕೇಳೋದು ಸರಿಯಲ್ಲ. ಉತ್ತರ ಕರ್ನಾಟಕಕ್ಕೆ ಹೆಚ್ಚು ಆಧ್ಯತೆ ಕೊಡಿ ಅಂತ ಕೇಳಿದ್ದಾರೆ. ಅದನ್ನ ನಾವು ಮಾಡೋಣ ಎಂದರು.