ಬೆಂಗಳೂರು ಉತ್ತರ: ಹೆಬ್ಬಾಳ ವಿಭಾಗ ವ್ಯಾಪ್ತಿಯಲ್ಲಿ ಸಾಮೂಹಿಕ ಸ್ವಚ್ಛತಾ ಅಭಿಯಾನ – 4. ಟನ್ ತ್ಯಾಜ್ಯ ತೆರವು
ನಗರ ಪಾಲಿಕೆಯನ್ನು ಬ್ಲಾಕ್ ಸ್ಪಾಟ್ ಮುಕ್ತ ಪ್ರದೇಶವನ್ನಾಗಿ ಮಾಡುವ ಹಾಗೂ ಸ್ವಚ್ಛತೆ ಮತ್ತು ಸೌಂದರ್ಯವನ್ನು ಕಾಪಾಡುವ ಉದ್ದೇಶದಿಂದ, ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಹೆಬ್ಬಾಳ ವಿಭಾಗ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ 12:30 ರ ಸುಮಾರಿಗೆ ಸಾಮೂಹಿಕ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು. ವಾರ್ಡ್ ಸಂಖ್ಯೆ 18 .ಡಾಲರ್ಸ್ ಕಾಲೋನಿ ಪೆಬಲಬೇ ಅಪಾರ್ಟ್ಮೆಂಟ್ ನಿಂದ ಬುಲೆವಾಡ ಪಾರ್ಕ್ ವರೆಗೆ 1.5 ಕಿಲೋಮೀಟರ್ ವ್ಯಾಪ್ತಿಯಲ್ಲಿ ನಡೆದ ಈ ಅಭಿಯಾನದಲ್ಲಿ ಒಟ್ಟು 40 ಪೌರಕಾರ್ಮಿಕರು, 2 ಟ್ರ್ಯಾಕ್ಟರ್ಗಳು ಹಾಗೂ ಮೂರು ಆಟೋ ಟಿಪ್ಪರ್ 1 ಕಾಂಪ್ಯಾಕ್ಟರ್ ಬಳಸಿ ಹೂಳು ಮತು ಕಸ ತೆರವು ಕಾರ್ಯಗಳು ಕೈಗೊಳ್ಳಲಾಯಿತು.