ಕೊಳ್ಳೇಗಾಲ:* ತಾಲೂಕಿನ ಶಿವನ ಸ ಮುದ್ರ ಗ್ರಾಮದಲ್ಲಿರುವ ಆದಿ ಪರಾ ಶಕ್ತಿ ಮಿನಿ ಪಾರ್ಟಿ ಹಾಲ್ ಕಟ್ಟಡದ ಕೊಠ ಡಿಯಲ್ಲಿ ಭಾನುವಾರ ಬೆಳಗಿನ ಜಾವ ಅಕ್ರಮವಾಗಿ ಜೂಜಾಟ ತೊಡಗಿದ್ದ 14 ಜನರನ್ನು ಪೊಲೀಸರು ಬಂಧಿಸಿದ್ದು ಪಣ ಕ್ಕಿಟ್ಟಿದ್ದ 16210 ರೂಪಾಯಿಗಳನ್ನು ವಶಕ್ಕೆ ಪಡೆದಿದ್ದಾರೆ. ಕನಕಪುರ ತಾಲೂಕಿನ ತೋಟಹಳ್ಳಿ ಗ್ರಾಮದ ಕೃಷ್ಣ (48), ರಮೇಶ್ (45), ನಟರಾಜು (42), ರಮೇಶ್ (36), ಕೃಷ್ಣ (55) ಮಧು (38), ರಾಕೇಶ್ (46) ದಿಲೀಪ್ (34), ಆನಂದ್ (34) ರವಿ ಚಂದ್ರ (42), ಗಡಸಹಳ್ಳಿ ಗ್ರಾಮದ ಉಮೇಶ್ (43), ತಾಂಡ್ಯ ಗ್ರಾಮದ ರಮೇಶ್ (49), ಸಾತನೂರು ಟೌನ್ನ ಹರೀಶ್ ಕುಮಾರ್ (34), ಕುಣಿಗಲ್ ತಾಲೂಕಿನ ಹೊನ್ನ ಮಾಚನಹಳ್ಳಿ ಗ್ರಾಮದ ಪ್ರಸನ್ನ ಕುಮಾರ್ (43) ಬಂಧಿತ ಆರೋಪಿಗಳಾಗಿದ್ದಾರೆ.