ಅಂಕೋಲ: ಕಂಚಿನಬಾಗಿಲು ಬಳಿ ಭೀಕರ ಅಪಘಾತ ಇಬ್ಬರು ಸ್ಥಳದಲ್ಲೇ ಸಾವು!
ಅಂಕೋಲಾ ತಾಲೂಕಿನ ಬಾಳೇಗುಳಿ – ಯಲ್ಲಾಪುರ ಮಧ್ಯೆ ಬರುವ ಕಂಚಿನಬಾಗಿಲು ಎನ್ನುವಲ್ಲಿ ಟ್ಯಾಂಕರ್ ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿ ಯಾಗಿ ಇಬ್ಬರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ 6.30ರ ವೇಳೆ ಸಂಭವಿಸಿದೆ. ಬಸ್ ನಲ್ಲಿದ್ದ ಹತ್ತು ಜನ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.ಅಂಕೋಲಾ ದಿಂದ ಯಲ್ಲಾಪುರ ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಅತೀ ವೇಗವಾಗಿ ಬಂದು, ಎದುರಿಗೆ ಬರುತಿದ್ದ ಬಸ್ ಗೆ ಗುದ್ದಿದೆ. ಅಂಕೋಲಾ ಕೇಣಿ ಗ್ರಾಮದ ಭಾಸ್ಕರ್ ಪಾಂಡುರಂಗ ಗಾಂವ್ಕರ್ ಹಾಗೂ ಲಾರಿ ಚಾಲಕ ಮೃತಪಟ್ಟಿದ್ದಾರೆ. ಗಾಯಗೊಂಡ ಹತ್ತು ಜನರನ್ನು ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕಳುಹಿಸಿಕೊಡಲಾಗುತ್ತಿದೆ. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ