ಶಿರಹಟ್ಟಿ: ಪ್ರಹ್ಲಾದ್ ಜೋಶಿಯನ್ನು ಸೋಲಿಸಲು ಚಿಂತನ ಮಂಥನ ನಡೆಸಲಾಗುತ್ತಿದೆ: ಪಟ್ಟಣದಲ್ಲಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ
ನಮಗೆ ಉತ್ತರ ಸಿಕ್ಕಿದೆ, ಪ್ರಹ್ಲಾದ್ ಜೋಶಿಯನ್ನು ಸೋಲಿಸಲು ಚಿಂತನ ಮಂಥನ ನಡೆಸಲಾಗುತ್ತಿದೆ ಎಂದು ಶಿರಹಟ್ಟಿ ಪಟ್ಟಣದಲ್ಲಿ ಶನಿವಾರ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ನಾವು ಕೊಟ್ಟಿರುವ ಗಡುವು ಮುಗಿಯುವ ಮೊದಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಹ್ಲಾದ್ ಜೋಶಿ ಅವರೇ ಅಭ್ಯರ್ಥಿ, ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅವರು ಬದಲಿ ಮಾಡದಿದ್ದರೆ ಮತದಾರ ಪ್ರಭು ಬದಲಿ ಮಾಡಲಿದ್ದಾರೆ, ಜೋಶಿಯನ್ನು ಸೋಲಿಸುವುದೇ ನಮ್ಮ ಗುರಿ ಎಂದರು.