ಅಂಕೋಲ: ಗಾಬೀತವಾಡಾದ ಕಡಲತೀರಕ್ಕೆ ಬಂದು ಬಿದ್ದ ಮೀನಿನ ರಾಶಿ: ಮೀನು ಸಂಗ್ರಹಿಸಲು ಮುಗಿ ಬಿದ್ದ ಜನತೆ
ಅಂಕೋಲಾ ತಾಲೂಕಿನ ಹಾರವಾಡಾದ ಗಾಬೀತವಾಡಾದಲ್ಲಿ ಶನಿವಾರ ಮಧ್ಯಾಹ್ನ 12ರ ಸುಮಾರು ರಾಶಿ ರಾಶಿ ಮೀನುಗಳು ಕಡಲತೀರಕ್ಕೆ ಬಂದು ಬಿದ್ದ ಘಟನೆ ಸಂಭವಿಸಿದೆ. ಈ ಮೀನಿನ ರಾಶಿಯನ್ನು ಕಂಡ ಸ್ಥಳೀಯರು ಅವುಗಳನ್ನು ಸಂಗ್ರಹಿಸಲು ಮುಗಿಬಿದ್ದರು. ಹವಾಮಾನ ವೈಪರೀತ್ಯದಿಂದ ಈ ರೀತಿ ಆಗಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ.