ಶಾಸಕ ಬಿ.ಆರ್.ಪಾಟೀಲ್ ಅವರು ನಾಳೆಯಿಂದ ಅಧಿವೇಶನ ಹಿನ್ನೆಲೆ ಹಾಗೂ ಸದನದಲ್ಲಿ ನರೇಗಾ ಕುರಿತು ಚರ್ಚೆ ವಿಚಾರಕ್ಕೆ ಕುರಿತಂತೆ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಕಾಸಸೌಧದ ಬಳಿ ಮಾತನಾಡಿ, ಮಹಾತ್ಮಗಾಂಧೀಜಿ ಹೆಸರು ತೆಗೆದಿದ್ದಾರೆ. ಹೆಸರು ತೆಗೆದು ಜೀರಾಮ್ ಜಿ ಮಾಡಿದ್ದಾರೆ. ಅವರದ್ದು ಜೀರಾಂಜಿ,ನಮ್ಮದು ಹೇರಾಮ್ ಜಿ. ಇದು ಗುಲಾಮಗಿರಿಯ ಸಂಕೇತ. ಬಿಎಸಿ ಸಭೆಯಲ್ಲಿ ನಿರ್ಧಾರ ಮಾಡಲಾಗುತ್ತೆ. ನಾವೆಲ್ಲರೂ ಸದನದಲ್ಲಿ ಭಾಗವಹಿಸ್ತೇವೆ. ಗಾಂಧಿ ಬಿಜೆಪಿ ಅವರಿಗೆ ನುಂಗಲಾರದ ತುತ್ತು. ಅಂತಹ ಮೇದಾವಿ ಹೆಸರು ತೆಗೆದು ಹಾಕಿದ್ದಾರೆ. ದೇಶ ಅಲ್ಲ ಅಂತರಾಷ್ಟ್ರೀಯ ಮಟ್ಟದ ಹೆಸರು ಗಾಂಧಿ, ಈಗ ಅವರ ಹೆಸರನ್ನ ತೆಗೆದಿದ್ದಾರೆ. ಕೇಂದ್ರ ಸರ್ಕಾರ ತಮ್ಮದೇ ಪ್ರಭಾವ ಬೀರೋಕೆ ಹೊರಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.