ಮದ್ದೂರು: ನಗರದಿಂದ ಬೆಂಗಳೂರಿಗೆ ಸಾವಿಗೆ ತೆರಳುತ್ತಿದ್ದವರು ಆಸ್ಪತ್ರೆಗೆ ದಾಖಲು, ಚನ್ನೇಗೌಡನದೊಡ್ಡಿ ಬಳಿ ಟೈರ್ ಬ್ಲಾಸ್ಟ್
Maddur, Mandya | Sep 22, 2025 ಮದ್ದೂರು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಚನ್ನೇಗೌಡನದೊಡ್ಡಿ ಸಮೀಪ ಕಾರಿನ ಟೈರ್ ಬ್ಲಾಸ್ಟ್ನಿಂದ ಕಾರು ಫಲ್ಟಿಯಾಗಿ 9 ಮಂದಿ ಗಾಯಗೊಂಡಿರುವ ಘಟನೆ ಜರುಗಿದೆ. ಮಂಡ್ಯದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೈಹದ್ ಅಕ್ಪರ್ ಅವರು ತಮ್ಮ ಸಂಬಂಧಿಕರ ಸಾವಿಗೆ ಬೆಂಗಳೂರಿಗೆ ತೆರಳುವ ವೇಳೆ ಮದ್ದೂರು ಪಟ್ಟಣದ ಚನ್ನೇಗೌಡನದೊಡ್ಡಿ ಸಮೀಪದಲ್ಲಿ ಕಾರಿನ ಟೈರ್ ಬ್ಲಾಸ್ಟ್ನಿಂದ ಕಾರು ಫಲ್ಟಿಯಾಗಿ ಸುಮಾರು 30 ಅಡಿಗೂ ಹೆಚ್ಚು ಕಾರು ಎಳೆದು ಹೋಗಿದೆ. ಅದೃಷ್ಟವಾಸತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಲ್ಲರಿಗೂ ಸಣ್ಣಪುಟ್ಟ ಪೆಟ್ಟುಗಳಾಗಿದ್ದು ಸ್ಥಳಕ್ಕೆ ತಕ್ಷಣ ಆಂಬ್ಯೂಲೆನ್ಸ್ಗೆ ಸ್ಥಳೀಯರು ಮತ್ತು ಐಶ್ವರ್ಯ ಶಾಲೆಯ ಸಿಬ್ಬಂದಿಗಳು ಕರೆಮಾಡಿ ಆಸ್ಪತ್ರೆಗೆ ದಾಖಲು ಪಡಿಸಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂ