ಕೊತ್ವಾಲ ಶಿಷ್ಯನಿಗೆ ಧಿಕ್ಕಾರ ಎಂಬ ಬಿಜೆಪಿ ಸದಸ್ಯರ ಘೋಷಣೆ ಹಿನ್ನಲೆ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಬಿಜೆಪಿ ಸದಸ್ಯರ ವಿರುದ್ಧ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು. ಕೊತ್ವಾಲಪುರವನ್ನೇ ಕೋದಂಡರಾಮಪುರ ಅಂತ ಬದಲಿಸಿಕೊಂಡವರು ನಮಗೆ ಸರ್ಟಿಫಿಕೇಟ್ ಕೊಡಬೇಕಾಗಿಲ್ಲ. ರಾಜ್ಯಪಾಲರ ಕರ್ತವ್ಯಗಳ ಬಗ್ಗೆ ಸಂವಿಧಾನದ 163, 164, 175(1) ವಿಧಿಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಭಾಷಣ ಮಾಡುವಾಗ ಯಾರೂ ಅಡ್ಡಿಪಡಿಸಿಲ್ಲ. ಆದರೆ ಭಾಷಣ ನಿಲ್ಲಿಸಬೇಕು ಎಂದು ಹೇಳಿದವರು ಯಾರು? ಬಿಜೆಪಿಯವರಾ, ಆರ್‌ಎಸ್‌ಎಸ್‌ನವರಾ, ಮೋದಿ, ಗಡಿಪಾರಿ ಅಮಿತ್ ಶಾನಾ? ಪೋಕ್ಸೊ ಕೇಸ್‌ನಲ್ಲಿರುವವರಿಗೆ ಹೂಮಾಲೆ ಹಾಕಿ, ಅವರ ಮಾರ್ಗದರ್ಶನದಲ್ಲಿ ನಡೆಯುವ ಲಜ್ಜೆಗೆಟ್ಟ ಪಕ್ಷ ನಮ್ಮದು ಅಲ್ಲ.