ಶಿವಮೊಗ್ಗ: ಅಳಿಯನ ಆತ್ಮಹತ್ಯೆ ಕುರಿತು ನಗರದಲ್ಲಿ ಮಾಜಿ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ
ಅಳಿಯ ಪ್ರತಾಪ್ ಕುಮಾರ್ ಅವರ ಆತ್ಮಹತ್ಯೆ ಕುರಿತಾಗಿ ಶಿವಮೊಗ್ಗ ನಗರದಲ್ಲಿ ಮಾಜಿ ಸಚಿವ ಬಿಸಿ ಪಾಟೀಲ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಧ್ಯಾಹ್ನ 1:45ಕ್ಕೆ ಬ್ರದರ್ ಫೋನ್ ಮಾಡಿದ್ರು ಪ್ರತಾಪ್ ಕಾಣೆಯಾದ ವಿಚಾರ ತಿಳಿದು ದಾವಣಗೆರೆ ಶಿವಮೊಗ್ಗ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದೆ. ಹೊನ್ನಾಳಿ ಮಲೆಬೆನ್ನೂರಿನಲ್ಲಿ ರೋಡ್ ನಲ್ಲಿ ಇದ್ದೀನಿ ಎಂದು ಪ್ರತಾಪ್ ಒಮ್ಮೆ ಕಾಲ್ ರಿಸೀವ್ ಮಾಡಿ ಹೇಳಿದ್ರು. ಜೋಳಕ್ಕೆ ಹಾಕಿದ ಔಷಧ ತೆಗೆದುಕೊಂಡಿದ್ದಾರೆ ದಾವಣಗೆರೆಗೆ ಶಿಫ್ಟ್ ಮಾಡೋಕೆ ಹೇಳಿದ್ವಿ, ಶಿವಮೊಗ್ಗ ಹತ್ರ ಅಂತ ಇಲ್ಲಿಗೆ ಶಿಫ್ಟ್ ಮಾಡಲಾಗಿದೆ.ಶಿಕಾರಿಪುರ ಹತ್ತಿರ ಬಂದಾಗ ಪ್ರತಾಪ್ ಸಾವನಪ್ಪಿದ್ದಾರೆ ಮಕ್ಕಳ ವಿಚಾರದಲ್ಲಿ ಕೊರಗುತ್ತಿದ್ದರು ಎಂದರು.