ಬೆಂಗಳೂರು ಉತ್ತರ: ನಗರದಲ್ಲಿ ಅಪ್ಪ ಕೊಡಿಸಿದ ಸೈಕಲ್ ಎತ್ತಿಕೊಂಡು ರೋಡಿಗೆ ಬಂದ ಬಾಲಕ ಟಿಪ್ಪರ್ ಲಾರಿಗೆ ಬಲಿ
ಆತ ಅಪ್ಪ ಅಮ್ಮನ ಮುದ್ದಿನ ಮಗ. ಮನೆಯಲ್ಲಿ ಬಡತನ ಇದ್ರೂ ಮಗ ಆಸೆಗೆ ಯಾವೂದೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿದ್ರು. ಆದರೆ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಹಾಲಕ್ಷ್ಮೀ ಲೇಔಟ್ ನಲ್ಲಿ ಅಪ್ಪ ಕೊಡಿಸಿದ್ದ ಸೈಕಲ್ ನಲ್ಲಿ ಮಗ ಪ್ರಾಣ ಬಿಟ್ಟಿದ್ದಾನೆ. ಹೌದು ಖಾಸಗಿ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದ 12 ವರ್ಷದ ಶಶಾಂಕ್. ಕಮಲಾನಗರದ ನಿವಾಸಿಗಾಳದ ರಾಜೇಶ್ ಮತ್ತು ಜ್ಯೋತಿ ಎಂಬುವವರ ಪುತ್ರ. ರಾಜೇಶ್ ವೃತ್ತಿಯಲ್ಲಿ ಕಾರ್ಪರೆಂಟರ್ ಕೆಲಸ ಮಾಡಿಕೊಂಡಿದ್ರು. ಶಶಾಂಕ್ ಹೊಸ ಸೈಕಲ್ ಬೇಕು ಅಂತ ಹಠ ಮಾಡಿ ಕಳೆದ ಹದಿನೈದು ದಿನಗಳ ಹಿಂದೆ ಸೈಕಲ್ ಕೊಡಿಸಿಕೊಂಡಿದ್ದ. ಇಂದು ಎಗ್ಸಾಮ್ ಮುಗಿಸಿ ಕಮಾಲನಗರದಿಂದ ಕಾಮಕ್ಷಿಪಾಳ್ಯದ ಗಣೇಶ ಟೆಂಪಲ್ ರಸ್ತೆಯಲ್ಲಿರೋ ಸ್ನೇಹಿತನನ್ನ ನೋಡಲು ಬಂದಿದ್ದಾನೆ.