ಶ್ರೀನಿವಾಸಪುರ: ಪಟ್ಟಣದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿವತಿಯಿಂದ ನೂತನ ಪದಾಧಿಕಾರಿಗಳ ಸಭೆ
ಸಂಘಕ್ಕೆ ಅನೇಕ ವರ್ಷಗಳ ಇತಿಹಾಸವಿದೆ. ತಾಲೂಕಿನಲ್ಲಿ ಸಂಘವನ್ನು ಕಟ್ಟಿ ಬೆಳಸಿದವರು ಇದ್ದು , ಅವರ ಹಿತಚಿಂತನೆಗಳ ಬಗ್ಗೆ ಪರಾರ್ಮಸಿಸಿ ಸಂಘದ ದ್ಯೇಯೋದ್ದೇಶಗಳಿಗೆ ಒತ್ತು ನೀಡುವಂತೆ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ನಾರಾಯಣಸ್ವಾಮಿ ತಿಳಿಸಿದರು. ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ತಾಲೂಕು ದಲಿತ ಸಂಘರ್ಷ ಸಮಿತಿವತಿಯಿಂದ ನೂತನ ಪದಾಧಿಕಾರಿಗಳ ಸಭೆಗೆ ಚಾಲನೆ ನೀಡಿ ಮಾತನಾಡಿದರು. ತಾಲೂಕು ಸಂಚಾಲಕ ಹನುಮಂತು, ತಾಲೂಕು ಸಹ ಸಂಚಾಲಕ ಡಿ.ಮಂಜುನಾಥ್, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವಿಭಾಗದ ಪದಾಧಿಕಾರಿಗಳಾದ ಎಸ್.ಷೀರ್ಬಾಬು, ಮೂರ್ತೆಪ್ಪ, ನರಸಿಂಹಮೂರ್ತಿ, ಸುರೇಶ್, ಶ್ರೀನಿವಾಸ್, ಯಲ್ದೂರು ವೆಂಕಟರಮಣಪ್ಪ, ಸಿ.ವೆಂಕಟರಮಣ, ಖಜಾಂಚಿ . ಅಂಬರೀಶ್ ಆಯ್ಕೆ ಯಾದರು.