ಬೆಂಗಳೂರು ಉತ್ತರ: ಬಿಜೆಪಿ ಅವರು ಗಾಳಿಯಲ್ಲಿ ಗುಂಡು ಹೊಡೆಯಬೇಡಿ, ದಾಖಲೆ ಕೊಡಿ: ನಗರದಲ್ಲಿ ಪ್ರಿಯಾಂಕ ಖರ್ಗೆ
ಬಿವೈ ರಾಘವೇಂದ್ರ ಆರೋಪ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ರೇಸ್ ಕೋರ್ಸ್ ರಸ್ತೆ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿಯವರು ಅವರು ಇತಿಹಾಸದಲ್ಲೇ ವೀಕ್ ಇದ್ದಾರೆ. ಬಿವೈ ರಾಘವೇಂದ್ರ ತಂದೆ ಯಡಿಯೂರಪ್ಪ ನವರು ಅನಂತ್ ಕುಮಾರ್ ಜೊತೆಗೆ ವೇದಿಕೆ ಹಂಚಿಕೊಂಡಾಗ ಏನ್ ಮಾತಾಡಿದ್ರು ಮೇಲಿನವರಿಗೆ ಕಪ್ಪ ಕೊಡಬೇಕಪ್ಪ ಅಂತ ದಿವಂಗತ ಅನಂತ್ ಕುಮಾರ್ ಗೆ ಹೇಳಿದ್ರು ಅದು ಕೂಡ ವೇದಿಕೆಯಲ್ಲೇ. ಇದೆಲ್ಲ ಬಿಜೆಪಿಯ ಇತಿಹಾಸ. ಯಡಿಯೂರಪ್ಪ ಕಪ್ಪ ಕಾಣಿಕೆ ಸರಿಯಾಗಿ ಕೊಟ್ಟಿಲ್ಲ ಅಂತ ಸದಾನಂದ ಗೌಡಗೆ ಚೇಂಜ್ ಮಾಡಿದ್ರಾ?? ಸದಾನಂದ ಗೌಡ ಕೊಟ್ಟಿಲ್ಲ ಅಂತ ಜಗದೀಶ್ ಶೆಟ್ಟರ್ ಗೆ ಸಿಎಂ ಮಾಡಿದ್ರಾ?? ಬಿಹಾರಕ್ಕೆ ಹಣ ಕೊಡಬೇಕು ಅಂದ್ರೆ ಏನಾದರೂ ದಾಖಲೆ ಕೊಡಿ,