ಸಂಡೂರು: ಕೆರೆಗೆ ಬಿದ್ದ 17 ವರ್ಷದ ಬಾಲಕ ನಾಪತ್ತೆ, ಶೋಧ ಕಾರ್ಯ ಮುಂದುವರಿಕೆ
ಯಶವಂತನಗರ ಗ್ರಾಮದ ಹೊರವಲಯದಲ್ಲಿರುವ ರಾಘಾಪುರ ಕೆರೆಯಲ್ಲಿ ಈಜಲು ತೆರಳಿದ್ದ ಆಕಾಶ (17) ಎಂಬ ಬಾಲಕ ನಾಪತ್ತೆಯಾಗಿದ್ದಾನೆ. ಈ ಘಟನೆ ಅ.6, ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಂಭವಿಸಿದೆ ಎಂದು ತಿಳಿದುಬಂದಿದೆ.ಮಾಹಿತಿಯ ಪ್ರಕಾರ, ಆಕಾಶನು ತನ್ನ ಇಬ್ಬರು ಸ್ನೇಹಿತರೊಂದಿಗೆ ಬಲೂನ್ ಆಕಾರದ ಟ್ಯೂಬ್ನ ಸಹಾಯದಿಂದ ಕೆರೆಯಲ್ಲಿ ಈಜುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಉಳಿದ ಇಬ್ಬರು ಸ್ನೇಹಿತರು ಸುರಕ್ಷಿತವಾಗಿ ದಡ ಸೇರಿಕೊಂಡಿದ್ದಾರೆ.ಘಟನೆ ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಶೋಧಕಾರ್ಯ ಆರಂಭಿಸಿದ್ದಾರೆ. ಕಳೆದ ಎರಡು ದಿನಗಳಿಂದ ಶೋಧ ಕಾರ್ಯ ತೀವ್ರಗೊಳಿಸಲಾಗಿದ್ದು, ಬಾಲಕ ಪತ್ತೆಯಾಗುವವರೆಗೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸಂಡೂರಿನ ಅಗ್ನಿಶಾಮಕ ಠಾ