ಬೆಂಗಳೂರು ಕೇಂದ್ರನಗರ ಪಾಲಿಕೆಯ ವತಿಯಿಂದ ಜಿಪಿಎಸ್ ಕಾರ್ಯ ನಿರ್ವಹಿಸಲು ನಿಯೋಜಿಸಿದ ಕಂದಾಯ ವಿಭಾಗದ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಗಾರವನ್ನು ಗುರುವಾರ ಸಂಜೆ 6 ಗಂಟೆ ಸುಮಾರಿಗೆ ನಗರದ ಟೌನ್ ಹಾಲ್ ಆಯೋಜಿಸಲಾಗಿತ್ತು. ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಕೇಂದ್ರ ನಗರ ಪಾಲಿಕೆಯ ಕಂದಾಯ ವಿಭಾಗದ ಅಪರ ಆಯುಕ್ತರಾದ ರಂಗನಾಥ್ ಅವರು ಜಿ.ಪಿ.ಎಸ್ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಹಾಗೂ ಬಾಕಿ ಕಂದಾಯ ಪಾವತಿಯನ್ನು ಮಾಡದ ವಾಣಿಜ್ಯ ಕಟ್ಟಡಗಳನ್ನು ಗುರುತಿಸಿ ಸೀಲಿಂಗ್ ಕಾರ್ಯವನ್ನು ಮಾಡುವಂತೆ ಕಂದಾಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.