ಕೆ.ಜಿ.ಎಫ್: ಅಕಸ್ಮಿಕವಾಗಿ ನಡೆದಿರುವ ಘಟನೆ ರಾಜಕೀಯ ಮಾಡಬಾರದು : ಬಡಮಾಕನಹಳ್ಳಿ ಯಲ್ಲಿ ಶಾಸಕ ಕೊತ್ತೂರು ಜಿ ಮಂಜುನಾಥ್
ಅಕಸ್ಮಿಕವಾಗಿ ನಡೆದಿರುವ ಘಟನೆ ರಾಜಕೀಯ ಮಾಡಬಾರದು : ಶಾಸಕ ಕೊತ್ತೂರು ಜಿ ಮಂಜುನಾಥ್ ವಿಜಯೋತ್ಸವ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ ಸಹನಾ ಕುಟುಂಬಸ್ಥರ ಪರವಾಗಿ ರಾಜ್ಯ ಸರ್ಕಾರ ಸೇರಿದಂತೆ ನಾವು ಇದ್ದೇವೆ ಇಂತಹ ಘಟನೆ ನಡೆಯಬಾರದಿತ್ತು ಅಕಸ್ಮಿಕವಾಗಿ ನಡೆದಿರುವ ಘಟನೆಗೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ಶಾಸಕ ಕೊತ್ತೂರು ಜಿ ಮಂಜುನಾಥ್ ಹೇಳಿದು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್.ಸಿ.ಬಿ ತಂದ ಐಪಿಎಲ್ ಟೂರ್ನಮೆಂಟ್ ಟ್ರೋಪಿಯನ್ನು ೧೮ ವರ್ಷಗಳ ಬಳಿಕೆ ಗೆದ್ದಿರುವ ಹಿನ್ನಲೆ ವಿಜಯೋತ್ಸವ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಸೇರಿದ್ದ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿ ಕಾಲ್ತುಳಿತಕ್ಕೆ ತುತ್ತಾಗಿ ಸಾವನ್ನಪ್ಪಿದ ಕೋಲಾರದ ಎಸ್.ಜಿ ಬಡಾವಣೆಯ ಶಿಕ್ಷಕರ