ಹುಕ್ಕೇರಿ: ಪಟ್ಟಣದಲ್ಲಿ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ 2025-26 ಸಾಲಿನ ಬಾಟ್ಲರ್ ಅಗ್ನಿ ಪ್ರದೀಪನ ಕಾರ್ಯಕ್ರಮ ಜರುಗಿತು
ಪಟ್ಟಣದಲ್ಲಿ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ 2025-26 ಸಾಲಿನ ಬಾಟ್ಲರ್ ಅಗ್ನಿ ಪ್ರದೀಪನ ಕಾರ್ಯಕ್ರಮ ಜರುಗಿತು. ಸಂಕೇಶ್ವರ ಪಟ್ಟಣದಲ್ಲಿ ಭಾನುವಾರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ 2025-26 ಸಾಲಿನ ಬಾಟ್ಲರ್ ಅಗ್ನಿ ಪ್ರದೀಪನ ಕಾರ್ಯಕ್ರಮ ಜರುಗಿತು. ನಿಡಸೋಸಿಯ ಡಾ.ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಸಂಕೇಶ್ವರದ ಶಂಕರಲಿಂಗ ಮಠದ ಶ್ರೀ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಸ್ವಾಮೀಜಿಗಳು ವಿದ್ಯ ಸಾನಿದ್ಯವನ್ನು ವಹಿಸಿದರು. ಈ ವೇಳೆ ಕಾರ್ಖಾನೆ ಮಾರ್ಗದರ್ಶಕರಾದ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ನಿಪ್ಪಾಣ್ಣಿ ಶಾಸಕಿ ಶಶಿಕಲಾ ಜೊಲ್ಲೆ, ಸೇರಿದಂತೆ ಮುಖಂಡರು ನಿರ್ದೇಶಕ ಮಂಡಳಿಯವರು ಉಪಸ್ಥಿತರಿದ್ದರು