ಬೆಂಗಳೂರು ಉತ್ತರ: ‘ಮಾಸದ ಮಾಧುರ್ಯ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿ.ಎಲ್ ಸಂತೋಷ್
ಜಗನ್ನಾಥ ಭವನ ಸಾರ್ವಜನಿಕ ಚಟುವಟಿಕೆಗೆ ಬಳಕೆ ಆಗಬೇಕೆಂಬ ಉದ್ದೇಶದಿಂದ ‘ಮಾಸದ ಮಾಧುರ್ಯ’ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ತಿಳಿಸಿದ್ದಾರೆ. ಮಲ್ಲೇಶ್ವರದ ತೆಲುಗು ವಿಜ್ಞಾನ ಸಮಿತಿಯ ಶ್ರೀಕೃಷ್ಣದೇವರಾಯ ಸಭಾಂಗಣದಲ್ಲಿ ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ನಡೆದ ‘ಜಗನ್ನಾಥ ಬಳಗ’ ಮತ್ತು ಬಿಜೆಪಿ ಸಾಂಸ್ಕøತಿಕ ಪ್ರಕೋಷ್ಠದ ‘ಮಾಸದ ಮಾಧುರ್ಯ’ 100 ರ ಸಂಭ್ರಮಾಚರಣೆ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣೇಶ್ ಯಾಜಿ ಮತ್ತು ದತ್ತಗುರು ಹೆಗ್ಡೆ ಅವರು ಈ ಕಾರ್ಯಕ್ರಮದ ಜೊತೆ ಬಲವಾಗಿ ನಿಂತವರು ಎಂದು ಮೆಚ್ಚುಗೆ ಸೂಚಿಸಿದರು. 100 ತಿಂಗಳು ಬಿಡದೆ ಮಾಡುವುದು ವೃತದಂತೆ ಎಂದು ನುಡಿದರು.