ಶ್ರೀನಿವಾಸಪುರ: ಸಂಚು ರೂಪಿಸಿ ಪಿಡಿಓ ವಿರುದ್ದ ದುರುದ್ದೇಶದ ಪ್ರತಿಭಟನೆ ಮಾಡಿದ್ದಾರೆ ದಳಸನೂರು ಗ್ರಾಮಸ್ಥ ನಾಗರಾಜ್
ಸಂಚು ರೂಪಿಸಿ ಪಿಡಿಓ ವಿರುದ್ದ ದುರುದ್ದೇಶದ ಪ್ರತಿಭಟನೆ ಮಾಡಿದ್ದಾರೆ ದಳಸನೂರು ಗ್ರಾಮಸ್ಥ ನಾಗರಾಜ್ ದಳಸನೂರು ಗ್ರಾಮ ಪಂಚಾಯಿತಿಯಲ್ಲಿ ೧೯೪೮ ರಲ್ಲಿ ಹರಿಜನರ ನಿವಾಸಗಳಿಗೆ ಎಂದು ಮೀಸಲಿಟ್ಟಿದ್ದ ಸರ್ಕಾರಿ ಜಾಗವನ್ನು ಇದೆ ಗ್ರಾಮದ ಕೆಲ ಬಲಾಡ್ಯರು ಅಕ್ರಮವಾಗಿ ತಮ್ಮಗಳ ಹೆಸರುಗಳಿಗೆ ಖಾತೆ ಬದಲಾವಣೆ ಮಾಡಿಸಿಕೊಂಡಿದ್ದರು. ಅದನ್ನು ಕಾನೂನಾತ್ನಕವಾಗಿ ಹರಿಜನರಾದ ನಾವು ಪ್ರಶ್ನಿಸಿದಕ್ಕೆ ಸಾಮಾನ್ಯ ಸಭೆಯಲ್ಲಿ ಬಲಾಡ್ಯರು ಅಕ್ರಮವಾಗಿ ಕಬಳಸಿದ್ದ ಸರ್ಕಾರಿ ಜಮೀನನ್ನು ಪುನಃ ನಮ್ಮ ಹರಿಜನ ಜನಾಂಗದ ನಿವಾಸಗಳಿಗಾಗಿ ಮೀಸಲಿಟ್ಟರು. ಇದೆ ಕಾರಣದಿಂದ ಪಿಡಿಓ ಸಹ ದಲಿತ ಮಹಿಳೆ ಆಗಿರುವ ಕಾರಣ ಅವರನ್ನು ಟಾರ್ಗೆಟ್ ಮಾಡಿ ವರ್ಗಾವಣೆ ಮಾಡಿಸಲು ಹೊಸಹಳ್ಳಿ ಬಾಬು ಇತರರು ಸಂ