ಶ್ರೀನಿವಾಸಪುರ: ಹೂಹಳ್ಳಿ ಗ್ರಾಮದಲ್ಲಿ ಸತತ ಮೂರನೇ ವರ್ಷದ ಶ್ರೀ ವೆಂಕಟೇಶ್ವರ ಸ್ವಾಮಿಯ ಕಲ್ಯಾಣೋತ್ಸವ
ಸತತ ಮೂರನೇ ವರ್ಷದ ಶ್ರೀ ವೆಂಕಟೇಶ್ವರ ಸ್ವಾಮಿಯ ಕಲ್ಯಾಣೋತ್ಸವ ಶ್ರೀನಿವಾಸಪುರ ತಾಲೂಕಿನ ಹೊವಳ್ಳಿ ಗ್ರಾಮದಲ್ಲಿ ಬಹಳ ಅದ್ದೂರಿಯಾಗಿ ಶನಿವಾರ ಹಾಗೂಭಾನುವಾರ ಸಂಜೆ ನಡೆಯಿತು. ತಿರುಪತಿ ತಿರುಮಲ ದೇವಸ್ಥಾನದಿಂದ ಶ್ರೀ ವೆಂಕಟೇಶ್ವರ ಸ್ವಾಮಿ ಮೂರ್ತಿಗಳನ್ನು ತಂದು ಹೂವಳ್ಳಿ ಗ್ರಾಮದ ನಾನಪ್ಪ ರವರ ಕುಟುಂಬದಿಂದ ಬಹಳ ಅದ್ದೂರಿಯಾಗಿ ಕಲ್ಯಾಣೋತ್ಸವವನ್ನು ನಡೆಸಲಾಯಿತು ಸಮಸ್ತ ಶ್ರೀನಿವಾಸಪುರ ತಾಲೂಕಿನ ಜನತೆಗೆ ಹಾಗೂ ಸಮಸ್ತ ಜನತೆಗೆ ದೇವರು ಸುಖಸಂಪತ್ತು ಕೊಟ್ಟು ಒಳ್ಳೆ ಮಳೆ ಬೆಳೆಯಾಗಲಿ ಶಾಂತಿ ಸೌಹಾರ್ದತೆಯಿಂದ ಹೀಗೆ ಮುಂದುವರೆಯಲಿ ಎಂದು ಕೃಷ್ಣಪ್ಪ ತಿಳಿಸಿದರು.